ಬಿಗ್ ಬಾಸ್ : ಸ್ನಾನಕ್ಕೆ ಹೋದ ನಟಿ, ಬಾಗಿಲಿಗೆ ಒರಗಿ ನಿಂತ ನಟ

0
93

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಸೆಲೆಬ್ರಿಟಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13ರಲ್ಲಿ ಕೆಲವೊಂದು ವಿವಾದಾತ್ಮಕ ಘಟನೆಗಳು ನಡೆಯುತ್ತಿವೆ. ಇಲ್ಲಿಯತನಕ ಬದ್ಧ ಶತ್ರುಗಳಂತಿದ್ದ ಸ್ಪರ್ಧಿಗಳು ಈಗ ಪರಮಾಪ್ತ ಸ್ನೇಹಿತರಂತೆ ಬದಲಾಗಿದ್ದಾರೆ. ಈ ಶೋನಲ್ಲಿ ವಿವಾದಾಸ್ಪದವಾಗಿ ಬದಲಾದ ಇಬ್ಬರು ಸ್ಪರ್ಧಿಗಳೆಂದರೆ ದೆವೊಲೀನಾ ಭಟ್ಟಾಚಾರ್ಜಿ ಹಾಗೂ ಸಿದ್ಧಾರ್ಥ್ ಶುಕ್ಲಾ.

ಶೋ ಆರಂಭವಾದ ಮೊದಲ ಮೂರು ವಾರಗಳಲ್ಲಿ ಇಬರಿಬ್ಬರೂ ಹಾವು ಮುಂಗುಸಿ ತರಹ ಇದ್ದರು. ಯಾವಾಗಲೂ ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಿದ್ದರು. ಸಿದ್ಧಾರ್ಥ್ ವಿರುದ್ಧ ಏಕಾಏಕಿ ಮೀಟೂ ಆರೋಪ ಮಾಡುವುದಾಗಿ ದೆವೊಲೀನಾ ಬೆದರಿಕೆ ಆಗಿದ್ದು ವಿವಾದಾಸ್ಪದವಾಗಿ ಬದಲಾಗಿತ್ತು.

ಈಗ ಇಬರಿಬ್ಬರಲ್ಲೂ ಆಗಿರುವ ಅಸಾಧಾರಣ ಬದಲಾವಣೆಯನ್ನು ನೋಡುತ್ತಿರುವ ಕಿರುತೆರೆ ವೀಕ್ಷಕರು ಶಾಕ್ ಆಗಿದ್ದಾರೆ. ಈಗ ಇವರಿಬ್ಬರೂ ಕುಚಿಕು ಗೆಳೆಯರಂತೆ ಬದಲಾಗಿದ್ದಾರೆ. ಅದೆಷ್ಟು ಆತ್ಮೀಯರಾಗಿದ್ದಾರೆ ಎಂದರೆ ದೆವೊಲೀನಾ ಸ್ನಾನ ಮಾಡಲು ಬಾರ್‌ರೂಮಿಗೆ ಹೋದರು. ಬಾತ್‌ರೂಮಿನಲ್ಲಿ ಅವರು ಸ್ನಾನ ಮಾಡುತ್ತಾ ಹಾಡುತ್ತಿರುವುದನ್ನು ಕೇಳಿಸಿಕೊಂಡ ಸಿದ್ಧಾರ್ಥ್ ಬಾತ್‌ರೂಮ್ ಬಾಗಿಲಿಗೇ ಒರಗಿ ನಿಂತಿದ್ದಾರೆ. ಅಷ್ಟೇ ಅಲ್ಲದೆ “ನಿನ್ನ ಹಾಡು, ನಿನ್ನ ಕಂಠ ಸೂಪರ್” ಎಂದು ಸಿಕ್ಕಾಪಟ್ಟೆ ಹೊಗಳಿದ್ದಾನೆ.

ಆದರೆ ಸಿದ್ಧಾರ್ಥ್ ಈ ರೀತಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಯುವತಿಯೊಬ್ಬರು ಸ್ನಾನ ಮಾಡುತ್ತಿರಬೇಕಾದರೆ ಸಿದ್ಧಾರ್ಥ್ ಬಾತ್‌ರೂಮ್ ಬಾಗಿಲಿಗೆ ಒರಗಿ ನಿಂತಿದ್ದು, ಬಾಗಿಲ ಬಳಿಯೇ ಇದ್ದದ್ದು ಸರಿಯಲ್ಲ ಎಂದು ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಈ ರೀತಿಯ ಸಾಕಷ್ಟು ಆಕ್ಷೇಪಾರ್ಹ ಸಂಗತಿಗಳು ಪದೇಪದೇ ನಡೆಯುತ್ತಿರುವ ಕಾರಣ ಈ ಶೋ ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ ಸಲ್ಮಾನ್ ಖಾನ್ ಪವರ್ ಮುಂದೆ ಯಾರೂ ಮುನ್ನುಗ್ಗಲು ಸಾಧ್ಯವಾಗಲಿಲ್ಲ. ಇನ್ನು ಸಿದ್ಧಾರ್ಥ್ ವಿಚಾರಕ್ಕೆ ಬಂದರೆ, ಹಿಂದಿಯ ‘ಬಾಲಿಕಾ ವಧು’ (ಕನ್ನಡದಲ್ಲಿ ಪುಟ್ಟಗೌರಿ ಮದುವೆ) ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here