ಹಿಮದಾಸ್ ಅವರ ತಂದೆ ಮಗಳಿಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟರು ಗೊತ್ತಾ? ಯಾರಿಗೂ ಬೇಡ, ನಿಮ್ಮದೊಂದು ಶೇರ್ ಇರಲಿ

0
3129

ಸ್ನೇಹಿತರೇ ಹಿಮದಾಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೆಟ್
ಅಂಡರ್ 20 ಮಹಿಳೆಯರ 400ಮೀ ಓಟದ ಸ್ಪರ್ಧೆಯಲ್ಲಿ ಹಿಮದಾಸ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಈ ಒಂದು ಸಾಧನೆ ಮಾಡಿದ್ದಾರೆ. 18 ವರ್ಷದ ಹಿಮದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಸ್ನೇಹಿತರೆ ಹಿಮದಾಸ್ ಒಬ್ಬ ರೈತನ ಮಗಳು, ಅವಳು ಓದುತ್ತ ಇದ್ದಂತ ಶಾಲೆಯ ದೈಹಿಕ ಶಿಕ್ಷಕ
ಒಮ್ಮೆ ರೈತನನ್ನು ಬೇಟಿ ಮಾಡಿ ನಿಮ್ಮ ಮಗಳು ವಾಲಿಬಾಲ್ ಆಟದಲ್ಲಿ ಬಹಳ ಮುಂದಿದ್ದಾಳೆ
ಹಾಗೆ ಓಟದಲ್ಲೂ ಕೂಡ ತುಂಬಾ ಚುರುಕಾಗಿದ್ದಾಳೆ. ಹೀಗಿದ್ದಾಗ ನೀವ್ಯಾಕೆ ಆಕೆಗೆ ಒಂದು ಅತ್ಯುತ್ತಮವಾದ ತರಬೇತಿಯನ್ನು ಕೊಡಿಸಬಾರದು ಎಂಬ ಒಂದು ಹೊಸ ಉಳವನ್ನು ಅವರ ತಂದೆ ಬಿಟ್ಟಿದ್ದರು ಆದರೆ ಆ ಪ್ರತಿಭಾವಂತ ಮಗಳ ತಂದೆ ರೈತನಾಗಿ ಕಸುಬು ನಿರ್ವಹಿಸುತ್ತಿದ್ದರಿಂದ ರಂಜಿತ್ ದಾಸ್ ಎಂಬ ರೈತನಿಗೆ ಕಾಡುವ ಹಣಕಾಸಿನ ಸಮಸ್ಯೆಗಳು ಸಾಕಾಗುವಷ್ಟಿದೆ.

 

ಜೊತೆಗೆ ಮನೆಯಲ್ಲಿದ್ದ 6 ಜನರನ್ನು ಸಾಕುವ ಜವಾಬ್ದಾರಿ ಕೂಡ ಆತನಿಗಿತ್ತು. 5 ಜನ ಮಕ್ಕಳಲ್ಲಿ ಕೊನೆಯ ಪುಟಾಣಿಯ ಪ್ರತಿಭಾವಂತ ಹುಡುಗಿಗೆ ತರಬೇತಿ ಕೊಡಿಸುವ ಕಡೆ ಯೋಚಿಸುತ್ತಾನೆ ಆ ಪುಟಾಣಿ ಹುಡುಗಿ ಹೆಸರೇ ಹಿಮದಾಸ್ ಮನೆಯಲ್ಲಿನ ಹಣಕಾಸಿನ ಸಮಸ್ಯೆಯಿಂದಾಗಿ ನೇರವಾಗಿ ಕೋಚ್ ಬಳಿ ಸೇರಿಸಲಾಗದೆ ಮೊದಲಿಗೆ ಅಪ್ಪನ ಗದ್ದೆಯ ಕಡೆ ಹಾದಿಗಳೇ ಈಕೆಯ ಓಟದ ಟ್ರ್ಯಾಕ್ ಗಳಾಗಿದ್ದವು. ಅವಳ ಮಿಂಚಿನ ಓಟದ ಛಾತಿಯನ್ನು ಗದ್ದೆಯ ಹಾದಿಗಳಲ್ಲಿ ನೋಡಿದ ರಂಜಿತ್ ದಾಸ್ ಗೆ ತನ್ನ ಮಗಳು ಹಿಮದಾಸ್ ಓಟದಲ್ಲಿ ಏನೋ ಒಂದನ್ನು ಸಾಧಿಸಿಯೇ ತೀರುತ್ತಾಳೆ ಅಂತ ಆತನಿಗೆ ಅನ್ನಿಸಿತ್ತು.(ಈ ಕೆಳಗಿರುವ ವಿಡಿಯೋ ನೋಡಿ)

 

ಆ ದಿನಗಳಲ್ಲಿಯೇ ಈ ಹಿಮದಾಸ್ ಗೌಹಲಿಯ ಸ್ಟೇಟ್ ಚಾಂಪಿಯನ್ ಷಿಪ್’ಗಳಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಿದ್ಲು.

ಅಲ್ಲಾರೀ ಯಾವುದೇ ಅಂತಾರಾಷ್ಟ್ರೀಯ ಗುಣಮಟ್ಟದ ಬೇಸಿಕ್ ತರಬೇತಿ ಇಲ್ಲದ ಅಸ್ಸಾಮಿಯ ಹಳ್ಳಿ ಹುಡುಗಿ ನೋಡ್ರಿ ಅಂತ ಯಾರೋ ಒಬ್ಬರು ಅಪಹಾಸ್ಯ ಮಾಡಿದ ದಿನ ಕಂಡ ಅವರ ತಂದೆ ಅದೆಷ್ಟೇ ಕಷ್ಟವಾದರೂ ಸರಿ ತನ್ನ ಮಗಳಿಗೆ ಉತ್ತಮವಾದ ತರಬೇತಿ ಕೊಡಿಸಲೇ ಬೇಕು ಅಂತ ನಿರ್ಧರಿಸಿದ ಅನಂತರ ಕಷ್ಟಪಟ್ಟು ಅಲ್ಲಿ ಇಲ್ಲಿ ಹಣ ಸೇರಿಸಿ ರೆಜಿನಾ ಸ್ಟೇಡಿಯಂ ಗ್ರೂಪಿಗೆ ಸೇರಿಸುತ್ತಾರೆ. ಅಲ್ಲಿ ಆಕೆ ಗುಣಮಟ್ಟದ ತರಬೇತಿಯನ್ನು ಹೊಂದ್ತಾಳೆ
ಅಲ್ಲಿ ದೊರೆತ ಅತ್ಯುತ್ತಮ ತರಬೇತಿ ಆಕೆಯನ್ನು ಮತ್ತು ಅತ್ಯುತ್ತಮ ಗೊಳಿಸುತ್ತ ಹಾಗೆಯೇ ಆಗಾಗ ನಡೆಯುವ ಚಾಂಪಿಯನ್ ಷಿಪ್’ಗಳಲ್ಲಿ ಭಾಗವಹಿಸುತ್ತ ಪ್ರಶಸ್ತಿ ಗೆಲ್ಲುತ್ತಾ ಸಾಗ್ತಾ ಇರ್ತಾಳೆ.

 

 

View this post on Instagram

 

6gold medals ? for India congratulations #himadas #athlete #india #goldmedal #proudmoments #indian #proudindian #weproudonhimadas

A post shared by Shairanaishq™️ (@shairanaishq) on

ಅಂತೂ ಇಂತೂ ಅಪ್ಪ ಬಿದ್ದ ಪಡಿ ಪಾಟಲಿಗೆ ತಕ್ಕನಾಗೆ ಮೌಲ್ಯ ದೊರಕುವ ಸಂದರ್ಭ ಬಂದೆ ಬಿಡ್ತು.. ಫಿನ್ಲೆಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ ದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಟ್ರ್ಯಾಕಿನ ನಾಲ್ಕನೇ ಸಾಲಿನಲ್ಲಿ ಓಡ್ತಿದ್ದಾಗ ರೊಮಾನಿಯಾದ ಆಂಡ್ರಿಯಾ ಮಿಕೋಲ್ಸ್ ಹಾಗೂ ಅವಳ ಪಕ್ಕದಲ್ಲಿ ಅಮೆರಿಕದ ಟೇಲರ್ ಮೆಸನ್ ಓಡ್ತಾ ಇದ್ಲು.

ಅಲ್ಲಿ ಹಾಜರಿದ್ದ ಓಟದ ಪಂಡಿತರೆಲ್ಲ ಟೇಲರ್ ಮೆಸನ್ ಚಿನ್ನ ಗೆಲ್ತಾಳೆ ಅಂತ ಅಂದುಕೊಂಡಿದ್ದರು, ಅವರ ಕವಡೆ ಭವಿಷ್ಯಕ್ಕೆ ತಕ್ಕಂತೆ ಏರ್ ಗನ್ನಿನ ಡಂ ಅಂತ ಸೌಂಡ್ ಬಂದ ತಕ್ಷಣ ಅಮೆರಿಕದ ಟೇಲರ್ ಮೆಸನ್ 300 ಮೀಟರ್ ವರೆಗೆ ಮುಂದಿದ್ದಳು ಆದರೆ ಹಿಮದಾಸ್ ಅಂದಿನ ಓಟದ ಜವಾಬ್ದಾರಿ ನೆನೆದು ಹಠಕ್ಕೆ ಬಿದ್ದವಳಂತೆ
300 ಮೀಟರಿನ ನಂತರ ಕೊನೆಯಲ್ಲಿ ಎಲ್ಲರನ್ನೂ ಹಿಂದಿಕ್ಕುತ್ತ ಅತಿ ವೇಗದಿಂದ ಓಡ್ತಾಳೆ ಅಂತೂ ಅಪ್ಪನಿಗಾಗಿ ಅವತ್ತು ಚಿನ್ನ ಗೆದ್ದಿದ್ಲು.

 

 

View this post on Instagram

 

A post shared by hima das (@hima_mon_jai) on

 

(ಈ ಮೇಲೆರುವ ವಿಡಿಯೋ ನೋಡಿ) ಇವತ್ತು ಬಂದಿರುವ ಖ್ಯಾತಿ ಹಣ ಅಂತಸ್ತು ಎಲ್ಲವನ್ನೂ ಪಕ್ಕಕ್ಕೆ ಇಡಿ, ಸಾಂಸಾರಿಕ ರಣ ಸಮಸ್ಯೆಗಳ ಹೋರಾಟದ ನಡುವೆ ಹಠತೊಟ್ಟು ಮಗಳಿಗೆ ತರಬೇತಿ ಕೊಡಿಸಿ ಆಕೆಯನ್ನು ಈ ಮಟ್ಟಕ್ಕೆ ಏರಿಸಿದ ಖ್ಯಾತಿ, ಪ್ರೀತಿ, ಒಲವು ಇವೆಲ್ಲವೂ ಆ ಅಪ್ಪನಿಗೆ ಸೇರಬೇಕು ಒಟ್ಟಲ್ಲಿ ಅಪ್ಪನ ಕಣ್ಣುಗಳಲ್ಲಿ ಚಿನ್ನದ ಆನಂದ ಭಾಷ್ಪ ಮೂಡಿಸುವಲ್ಲಿ ಮಗಳು ಹಿಮದಾಸ್ ಯಶಸ್ವಿಯಾಗಿದ್ಲು.

ಇತ್ತ ಕರ್ನಾಟಕದ ಮೀಡಿಯಾಗಳು ರಾಜಕಾರಣಿಗಳ ಹಿಂದೆ ಬಿದ್ದಿದ್ರೆ ಈ ಹಿಮದಾಸ್ ಇದೇ ತಿಂಗಳಲ್ಲಿ ಒಟ್ಟು 5 ಚಿನ್ನದ ಪದಕವನ್ನು ಭಾರತಕ್ಕೆ ತಂದಿದ್ದಾಳೆ, ಕರ್ನಾಟಕದ ಮೀಡಿಯಾಗಳಿಗೆ ಇದು ಕಾಣಿಸದಿದ್ದರೂ ಈ ಪ್ರಪಂಚವೇ ಅವಳನ್ನು ನೋಡ್ತಾ ಇದೆ ಅನ್ನೋದು ಭಾರತೀಯರಾದ ನಮಗೆ ಹೆಮ್ಮೆ ಅನಿಸುತ್ತದೆ.

 

 

View this post on Instagram

 

6gold medals ? for India congratulations #himadas #athlete #india #goldmedal #proudmoments #indian #proudindian #weproudonhimadas

A post shared by Shairanaishq™️ (@shairanaishq) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here