ಪ್ರೀತಿಸಿದ ಹುಡುಗಿಗೆ ಮನೆ ಕಟ್ಟಿಸಿಕೊಡಬೇಕೆಂದು ಈತ ಮಾಡಿದ ಕೆಲಸವಾದರೂ ಏನು ಗೊತ್ತಾ?

0
75

ಬೆಂಗಳೂರು: ತಾನು ಪ್ರೀತಿಸಿದ ಹುಡುಗಿಯನ್ನು ಬಹಳ ಶ್ರೀಮಂತಿಕೆಯಿಂದ ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಗಲು-ರಾತ್ರಿಯೆನ್ನದೇ ದುಡಿಮೆಗೆ ಕೈ ಹಾಕಿದೆ. ಹಾಗೆ ದುಡಿಯುವುದು ತಪ್ಪಲ್ಲ ಬಿಡಿ. ಹಾಗಂತ ಕನಸು ಕಾಣುವುದು ತಪ್ಪು ಅಂತಾ ಹೇಳಲ್ಲಾ. ಆದರೆ ಹಣ ಮಾಡಿ ದಿಢೀರ್‍ ಅಂತ ಶ್ರೀಮಂತನಾಗಬೇಕೆಂದು ಅಡ್ಡದಾರಿ ಹಿಡಿಯುವುದು ಮಾತ್ರ ತಪ್ಪು. ಈತ ಮಾಡಿದ್ದೂ ಅದನ್ನೇ. ದಿಢೀರನೇ ಶ್ರೀಮಂತನಾಗಬೇಕೆಂದು ಕಳ್ಳತನ ಮಾಡಲು ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ನಡೆದಿದೆ.

ನಗರದ ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನೆರೆಯ ಆಂಧ್ರ ರಾಜ್ಯದ ಅನಂತಪುರವನ್ನು ಬಿಟ್ಟು ಬೆಂಗಳೂರಿಗೆ ಬಂದು ವಾಸವಾಗಿದ್ದವನು ರಾಜು. ನೆರೆ ಮನೆಯಲ್ಲಿ ವಾಸವಾಗಿದ್ದ ಎರಡು ಮಕ್ಕಳ ತಾಯಿಯ ಮೋಹಕ್ಕೆ ಬಿದ್ದಿದ್ದನು. ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆ ಕೇಳಿದ್ದೆಲ್ಲವನ್ನೂ ಚಾಚೂ ತಪ್ಪದೇ ತಂದು ಕೊಡುತ್ತಿದ್ದ. ಹೀಗೆ ಮಾಡುತ್ತಾ ತಾನು ದುಡಿದ ಹಣವೆಲ್ಲಾ ಖಾಲಿಯಾದ ನಂತರ ರಾಜು ಸರಗಳ್ಳತನ ಮಾಡಲು ಮುಂದಾದನು,

ಹೋಟೆಲ್‍ವೊಂದರಲ್ಲಿ ಕ್ಲೀನರ್‍ ಕಂ ಸಪ್ಲೈಯರ್‍ ಆಗಿ ಕೆಲಸ ಮಾಡಿಕೊಂಡಿದ್ದ ರಾಜು ಕಳೆದ ಆರು ವರ್ಷಗಳಿಂದಲೂ ಇದೇ ಕೆಲಸ ಮಾಡುತ್ತಿದ್ದ. ಅಲ್ಲದೇ ಅನಂತಪುರದಿಂದ ಬಂದವ ಬೇರೆಲ್ಲೂ ಕೆಲಸಕ್ಕೆ ಹೋಗದೆ ಒಂದೇ ಕಡೆ ಮಾಡಿ ಬಹಳ ನಂಬಿಕಸ್ಥ ಎನಿಸಿಕೊಂಡಿದ್ದ. ಆದರೆ ಪ್ರೀತಿಯ ಬಲೆಗೆ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ತಾನು ವಾಸ ಮಾಡುತ್ತಿದ್ದ ಮನೆಯ ಪಕ್ಕದ ಮನೆಯ ಮಧ್ಯ ವಯಸ್ಸಿನ ಹೆಂಗಸಿನ ಜೊತೆಗೆ ಸಂಬಂಧ ಬೆಳೆಸಲು ಮುಂದಾಗಿದ್ದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣವಾಯಿತು. ಆಕೆಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಎಂಬುದನ್ನು ತಿಳಿದ ನಂತರವೂ ಆಕೆಯೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದನು. ಇದಕ್ಕೆ ಆಂಟಿಯೂ ಸೈ ಎಂದಿದ್ದಳು. ಆಕೆಯನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು ಎಂಬ ಕಾರಣಕ್ಕಾಗಿ ನಗರದ ಮಾರುಕಟ್ಟೆಯಲ್ಲಿ ಒಂಟಿ ಹೆಂಗಸರ ಸರವನ್ನು ಎಗರಿಸುವಲ್ಲಿ ಯಶಸ್ವಿಯಾದನು.

ಇದೇ ಕಸುಬನ್ನು ಕರಗತ ಮಾಡಿಕೊಂಡು ಮೊಬೈಲ್ ಕಳ್ಳತನಕ್ಕೂ ಮುಂದಾಗುತ್ತಾನೆ. ಹೀಗೆ ಕೈಯಲ್ಲಿ ಸ್ವಲ್ಪ ಕಾಸು ಓಡಾಡಲು ಪ್ರಾರಂಭವಾದಂತೆ ಬೇರೆ ಬೇರೆ ಏರಿಯಾಗಳಲ್ಲೂ ಇದೇ ಕೆಲಸಕ್ಕೆ ಶುರುವಿಟ್ಟುಕೊಂಡದ್ದೇ ತಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ಬಳಿ ಬರೋಬ್ಬರಿ ಏಳು ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್‍ ಪತ್ತೆಯಾಗಿರುವುದಾಗಿ ಪೊಲೀಸರು ತನಿಖೆ ವೇಳೆ ಬಹಿರಂಗ ಪಡಿಸಿದ್ದಾರೆ. ಪ್ರಸ್ತುತ ಕೆ.ಪಿ.ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು ಈತನನ್ನು ಮತ್ತಷ್ಟು ವಿಚಾರಣೆ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here