ಮದುವೆ ಅಲ್ಲಿ ವರನ ಮಿತಿ ಮೀರಿದ ನಾಗಿನಿ ಡ್ಯಾನ್ಸ್ ; ವಧುವಿನಿಂದ ಮದುವೆ ಕ್ಯಾನ್ಸಲ್

0
191

ಕಂಕಣ ಭಾಗ್ಯ ಕೂಡಿ ಬರಲು ಹಲವು ಕಾರಣಗಳಿರಬೇಕು. ಇಬ್ಬರಿಗೂ ಪ್ರೀತಿ ಇರಬೇಕು, ಪ್ರೀತಿಸಿದವರಾಗಿದ್ದರೆ ಧರ್ಯ ಇರಬೇಕು, ಅರೇಂಜ್ ಮ್ಯಾರೇಜ್ ಆಗಿದ್ದರೆ, ಜಾತಕ ಕೂಡಿ ಬರಬೇಕು, ಹಣೆಯಲ್ಲಿ ಬರೆದಿರಬೇಕು..ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಕಾರಣಗಳು ನೀಡಬಹುದು. ಆದರೆ ಅದೇ ಮದುವೆ ರದ್ದಾಗಲು ಕಾರಣವೇ ಬೇಕಿಲ್ಲ. ಮಂಟಪದಲ್ಲೇ ಹಲವು ಮದುವೆಗಳು ಮುರಿಬಿದ್ದ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ಬಾರಿ ನಾವು ಹೇಳುತ್ತಿರುವ ರದ್ದಾಗಿರೋ ಮದುವೆ ಕೊಂಚ ಭಿನ್ನ.

ವಧು ಸಿಂಗಾರಗೊಂಡು ವೇದಿಕೆಯಲ್ಲಿ ಕುಳಿತಿದ್ದಾಳೆ. ಇತ್ತ ವರ ಅರಬ್ ರಾಷ್ಟ್ರದ ಎಲ್ಲಾ ಸೆಂಟ್ ಹೊಡೆದು ಸ್ಟೇಜ್ ಹತ್ತಿದ್ದಾನೆ. ಹಾರ ಬದಲಾಯಿಸಿ ಆಗಿದೆ. ಇದೇ ಸಂಭ್ರಮದಲ್ಲಿ ಹುಡುಗ ಎರಡು ಸ್ಟೆಪ್ ಹಾಕಿದ್ದಾನೆ. ಕೇವಲ ಸ್ಟೆಪ್ಸ್ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಮದ್ಯದ ಅಮಿಲಿನಲ್ಲಿ ನಾಗಿನಿ ಡ್ಯಾನ್ಸ್ ಮಾಡಿದ್ದಾನೆ. ಕುಡಿದಿದ್ದು ಹೆಚ್ಚಾಗಿದೆ, ಡ್ಯಾನ್ಸ್ ಕೂಡ ಮಿತಿ ಮೀರಿದೆ. ತಕ್ಷಣವೇ ವಧು ಮಿತಿ ಮೀರಿದ ಡ್ಯಾನ್ಸ್‌ಗೆ ಆಕ್ಷೇಪ ಎತ್ತಿದ್ದಾಳೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

Hahahahahaha bhai kaun hai ye??kaun karta hai aise dance?#mp# funny #video#baraatdance #naagindance #wedding #anokha

A post shared by Maniesh Paul (@manieshpaul) on

ಮೊದಲೇ ಅಮಲು, ಹಾರ ಬದಲಾಯಿಸಿದ ತಕ್ಷಣವೇ ಸವಾರಿ ಮಾಡುತ್ತಿದ್ದಾಳೆ ಎಂದ ವರ, ಹುಡುಗಿಯ ಕಪಾಳಕ್ಕೆ ಭಾರಿಸಿದ್ದಾನೆ. ಸಿಟ್ಟಿಗೆದ್ದ ವಧು ಮದುವೆ ಬೇಡ ಎಂದಿದ್ದಾಳೆ. ಎರಡು ಕುಟಂಬದ ನಡುವೆ ಮರಾಮಾರಿಯೇ ಏರ್ಪಟ್ಟಿದೆ. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

ಮದುವೆ ಕ್ಯಾನ್ಸಲ್ ಮಾಡಿದ ನಿರ್ಧಾರವನ್ನು ಹುಡಿಯ ಪೋಷಕರು ಹಾಗೂ ಸಹೋದರ ಬೆಂಬಲಿಸಿದ್ದಾರೆ. ಶಿಸ್ತಿಲ್ಲದ ವರನ ಜೊತೆ ನನ್ನ ತಂಗಿ ಮದುವೆಯಾಗುವುದಕ್ಕಿಂತ ರದ್ದು ಮಾಡಿದ್ದೇ ಉತ್ತಮ. ವರನ ಕಡೆಯವರು ನೀಡಿದ ಎಲ್ಲಾ ಉಡುಗೊರೆ, ಸೀರೆಗಳನ್ನು ಹಿಂತಿರುಗಿಸಿದ್ದೇವೆ ಎಂದು ವಧುವಿನ ಸಹೋದರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ. ಎರಡೂ ಕಡೆಯವರು ಯಾವುದೇ ದೂರು ನೀಡಿಲ್ಲ. ಹೀಗಾಗಿ ಪ್ರಕರಣ ದಾಖಲಾಗಿಲ್ಲ.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here