ಪವರ್ ಸ್ಟಾರ್ ಪುನೀತ್ ಅವರ ಬಗ್ಗೆ ನಿಮಗೆ ಗೊತ್ತಿರದ ಅಪರೂಪದ ಸಂಗತಿಗಳು !

0
1173

ಪುನೀತ್ ರಾಜ್ ಕುಮಾರ್, ಹೌದು ಈ ಹೆಸರನ್ನ ಕೇಳಿದ ತಕ್ಷಣ ಪವರ್ ಸ್ಟಾರ್ ಅಂತ ಎಲ್ಲರೂ ಹೇಳ್ತಾರೆ. ಇದು ಬರೀ ಹೆಸರಲ್ಲ ಇದೂ ಕೂಡ ಒಂದು ಬ್ರಾಂಡ್ ಅಂದರೆ ತಪ್ಪೇನಲ್ಲ. ಕನ್ನಡದ ವರನಟ ಡಾ|| ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದಲ್ಲಿ, ಕಿರಿಯವರಾಗಿದ್ದ ಕಾರಣಕ್ಕೂ ಹಾಗು ಅವರ ಮುದ್ದು ಮೊಗದ ತುಂಟಾಟಕ್ಕೂ ಪ್ರೀತಿಪಾತ್ರರಾಗಿದ್ದರು. ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ನಂತರ ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದಾರ್ಪಣೆ ಮಾಡಿ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಆದರು.

 

 

 

ಬಾಲನಟನಾಗಿ 14 ಚಲಚಿತ್ರದಲ್ಲಿ ನಟಿಸಿ, ಬೆಟ್ಟದ ಹೂವು ಚಿತ್ರದ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ. ನಂತರ ಪರಶುರಾಮ ಚಿತ್ರದ ನಂತರ ತಮ್ಮ ಬಾಲ್ಯದ ನಟನೆಯನ್ನ ನಿಲ್ಲಿಸಿ ಡೈರೆಕ್ಟ್ ಆಗಿ ಅಪ್ಪು ಚಿತ್ರದ ಮೂಲಕ ನಾಯಕನಟರಾಗಿ ಬಂದರು. ಅಪ್ಪು ಚಿತ್ರದಿಂದ ಹಿಡಿದು ಈಗಿನ ನಟಸಾರ್ವಭೌಮ ಚಿತ್ರದ ವರೆಗೆ ಒಟ್ಟಾರೆ 30 ಚಿತ್ರಗಳಲ್ಲಿ ನಾಯಕನಟರಾಗಿದ್ದಾರೆ. ಮುಂದೆ ಯುವರತ್ನ ಮತ್ತು ಜೇಮ್ಸ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇವರ ನೃತ್ಯ ನೋಡಿದ ನೋಡುಗ ಪ್ರಭುಗಳು ಇವರನ್ನು ಡ್ಯಾನ್ಸ್ ಮಷಿನ್ ಅಂತ ಕರೆದರು.

ಹಾಗೂ ಮಾಯ ಬಜಾರ್ ಮತ್ತು ಕವಲು ದಾರಿ ಎಂಬ ಚಿತ್ರಗಳಿಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.ಇವರು ಕನ್ನಡದಲ್ಲಿ ಕಾಣುವ ಕೆಲ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರು. ಇವರು ನಟನೆ ಹಾಗೂ ಹಾಡುಗಾರಿಕೆಯಲ್ಲಿ ತಮ್ಮದೇ ಅಚ್ಚನ್ನು ಒತ್ತಿರುವುದುಂಟು.

ಇದೆಲ್ಲವೂ ನಿಮಗೆ ಗೊತ್ತಿರುವುದೇ, ಆದರೆ ತೆರೆ ಹಿಂದೆ ಪುನೀತ್ ಹೇಗಿರುತ್ತಾರೆ, ಹೇಗಿದ್ದಾರೆ ಅಂತ ನಿಮಗೆ ಯಾರಿಗಾದರೂ ಗೊತ್ತಾ ???

1.ಪುನೀತ್ ಬಾಲ್ಯದ ಹೆಸರು ಲೋಹಿತ್ ಅಂತ ಪುನೀತ್ ಬಾಲ್ಯದ ಹೆಸರು ಲೋಹಿತ್ ಅಂತ. ಆದರೆ ಆಮೇಲೆ ಪುನೀತ್ ಆಗಿ. ಅಭಿಮಾನಿಗಳ ಪ್ರೀತಿಯ ಅಪ್ಪು ಆಗಿ ಬದಲಾದ್ರು. 1975ರಲ್ಲಿ ಹುಟ್ಟಿ ಪುನೀತ್ 1976ರಲ್ಲಿ ಬಂದ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ತೆರೆ ಮೇಲೆ ಬಂದಿದ್ರು.

 

 

2.ಇಡೀ ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ಅವರನ್ನು ಹೊರತುಪಡಿಸಿದರೆ ಬಾಲನಟನಾಗಿ ಹಾಗೂ ನಾಯಕನಟನಾಗಿ ಎರಡರಲ್ಲೂ ಯಶಸ್ಸಿನ ಉತ್ತುಂಗ ನೋಡಿದ ಏಕೈಕ ಕಲಾವಿದ ನಮ್ಮ ಅಪ್ಪು ಮಾತ್ರ..

3.ಬಾಲ್ಯದಲ್ಲಿ ನಟಿಸೋಕೆ ಪ್ರೇರಣೆ ಹೊನ್ನವಳ್ಳಿ ಕೃಷ್ಣ ಪುನೀತ್ ಬಾಲ್ಯದಲ್ಲಿ ನಟಿಸೋಕೆ ಪ್ರೇರಣೆ ಹೊನ್ನವಳ್ಳಿ ಕೃಷ್ಣ ಅವರು. ಹೊನ್ನವಳ್ಳಿ ಕೃಷ್ಣ ಹೇಳಿದ್ದನ್ನ ಪುನೀತ್ ಮಾಡ್ತಿದ್ರು ಬಾಲ್ಯದಲ್ಲಿ ನಟಿಸಿದ್ದಕ್ಕೆ ಕಾರಣ ಹೊನ್ನವಳ್ಳಿ ಕೃಷ್ಣ.

 

4.ಶಿವಣ್ಣನಿಗೆ ಅಪ್ಪುನೇ ಸ್ಫೂರ್ತಿ ಬಾಲ್ಯದಲ್ಲಿ ಪುನೀತ್ ಎಲ್ಲ ಮಕ್ಕಳಂತೆ ತುಂಬಾ ತುಂಟ. ಅಂದುಕೊಂಡಿದ್ದನ್ನ ಮಾಡದೇ ಬಿಡ್ತಿರಲಿಲ್ಲ. ಕೇಳಿದಾಗ ಕೇಳಿದ್ದನ್ನ ಕೊಡಿಸ್ಬೇಕಿತ್ತು. ಆದರೆ ಈಗ ತುಂಬಾ ಸಿಂಪಲ್. ಶಿವಣ್ಣನಿಗೆ ಪುನೀತ್ ಅದ್ಭುತ ನಟ. ನಾವು ಸಿನಿಮಾಗೇ ಬರೋಕೆ ಅಪ್ಪುನೇ ಸ್ಫೂರ್ತಿ ಅಂತ ಸದಾ ಹೇಳ್ತಾರೆ ಶಿವಣ್ಣ.

5.ರಜನೀಕಾಂತ್ ಅವರು ಚಿತ್ರರಂಗವನ್ನು ಪ್ರವೇಶ ಮಾಡಿದ ವರ್ಷ 1975 ರಲ್ಲಿಯೇ ನಮ್ಮ ಅಪ್ಪು ಕೂಡ ಪ್ರವೇಶಿಸಿದ್ದು ಒಂಥರಾ ವಿಶೇಷ..ಇಬ್ಬರದ್ದೂ ಸ್ವಲ್ಪ ಕಪ್ಪು ಮೈಬಣ್ಣ..ಇಬ್ಬರದೂ ಸರಳ ವ್ಯಕ್ತಿತ್ವವೇ ಆಗಿದೆ..

6.ನಮ್ಮ ಅಪ್ಪುವಿನ ಧ್ವನಿ ಹೆಚ್ಚಾಗಿ ಹೋಲುವದು ಕ್ರಿಕೆಟ್ ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಧ್ವನಿಯನ್ನು.. ಬೇಕಾದ್ರೆ ಪರಿಶೀಲಿಸಿ ನೋಡಿ..ಇಬ್ಬರೂ ಅವರವರ ಕ್ಷೇತ್ರಗಳಲ್ಲಿ Mr.100 ಗಳೇ..ಇಬ್ಬರ ಅಭಿಮಾನಿಗಳ ಮನಸ್ಸುಗಳು ಪ್ರತಿ ಬಾರಿ ಅವರುಗಳು ಶತಕ ಬಾರಿಸಬೇಕಂತಾನೇ ಹಾತೊರೆಯುತ್ತವೆ..

 

 

 

7.ಮೊದಲು ಹಾಡಿದ್ದು ‘ಭಾಗ್ಯವಂತ’ ಸಿನಿಮಾದಲ್ಲಿ ಪುನೀತ್ ಮೊದಲು ಹಾಡಿದ್ದು ‘ಭಾಗ್ಯವಂತ’ ಸಿನಿಮಾದಲ್ಲಿ. “ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ” ಪುನೀತ್ ಹಾಡಿದ ಹಾಡು ಪುನೀತ್ ರಾಜ್ ಕುಮಾರ್ ಗೆ ಇವತ್ತಿಗೂ ರಾಜ್ ಕುಮಾರ್ ಗೆ ಜೈ ಅನ್ನೋದೇ ಹೆಚ್ಚು ಇಷ್ಟ. ಹೊರಗೆ ಹೋದ್ರೆ ಅದೇ ಕಿವಿಯಲ್ಲಿ ಕೇಳಿದ ಹಾಗಾಗುತ್ತಂತೆ.

 

8.ಇವರು 26 ಅನಾಥಾಶ್ರಮ, 20 ಕಾರ್ಪೊರೇಷನ್ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ ಹಾಗೂ 1500ಕ್ಕೂ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಹೌದು ನಿಜ ಇವುಗಳೆಲ್ಲವನ್ನೂ ಸ್ಥಾಪಿಸಿ ತಮ್ಮ ನಟನೆ ಯಿಂದ ಬರುವ ಹಾಗೂ ಅವರ ವ್ಯಾಪಾರ ವ್ಯವಹಾರದಿಂದ ಬರುವ ಲಾಭದಲ್ಲಿ ಕೊಂಚ ಹಣವನ್ನು ಈ ಎಲ್ಲ ಸಂಸ್ಥೆಗಳ ಉದ್ಧಾರಕ್ಕಾಗಿ ಮೀಸಲಿಡುವುದಲ್ಲದೆ, ಅನೇಕ ಜಾಹಿರಾತುಗಳಲ್ಲಿ ನಟಿಸಿ, ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರು ತಮ್ಮ ಹಾಡುಗಾರಿಕೆ ಮತ್ತು ಜಾಹೀರಾತಿನಿಂದ ಬರುವ ಸಂಪೂರ್ಣ ಹಣವನ್ನು ಈ ಒಳ್ಳೆಯ ಕೆಲಸಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಇಂತಹ ಸಹೃದಯಿ, ಧರ್ಮದಯಿ. ಇವರು ಬಂಗಾರದ ಮನುಷ್ಯನ ಬಂಗಾರದ ಮನಸ್ಸುಳ್ಳ ಮಗ. ಇಂತಹ ನೆರವಾಗುವ ವ್ಯಕ್ತಿಯ ಹುಟ್ಟುಹಬ್ಬ ಇಂದು ಎಲ್ಲರೂ ಶುಭ ಹಾರೈಸಿ ಇಂತಹ ಇನ್ನೂ ಹೆಚ್ಚು ಕೆಲಸವನ್ನ ಮಾಡಲು ಆ ದೇವರು ಇವರಿಗೆ ಚೈತನ್ಯ ನೀಡಲಿ ಎಂದು ಬೇಡಿಕೊಳ್ಳಿರಿ.

【ಕರ್ಣ】

LEAVE A REPLY

Please enter your comment!
Please enter your name here