ಗರ್ಭ ಧರಿಸಿದ ಟ್ರಾನ್ಸ್ಜೆಂಡರ್ ಪುರುಷ…!

0
481

ಅಮೆರಿಕಾದ ಟೆಕ್ಸಾಸ್ ನಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಟ್ರಾನ್ಸ್ಜೆಂಡರ್ ಪುರುಷ ಗರ್ಭ ಧರಿಸಿದ್ದಾನೆ. ತನ್ನ ಹೊಟ್ಟೆಯಲ್ಲಿ ಮಗುವಿದೆ ಎಂಬುದನ್ನು ತಿಳಿದ ಟ್ರಾನ್ಸ್ಜೆಂಡರ್ ಆಶ್ಚರ್ಯಕ್ಕೊಳಗಾಗಿದ್ದಾನೆ. ಮಗುವನ್ನು ಹೆತ್ತು ಉತ್ತಮ ಭವಿಷ್ಯ ನೀಡುವ ಕನಸು ಕಾಣ್ತಿದ್ದಾನೆ.

ಟೆಕ್ಸಾಸ್ ನ ವಿಲ್ಲೀ ಸಿಂಪ್ಸನ್ ಹಾಗೂ ಸ್ಟೀಫನ್ ಗಾತ್ ಟ್ರಾನ್ಸ್ಜೆಂಡರ್ ಜೋಡಿ ಬದುಕಲ್ಲಿ ದೊಡ್ಡ ಬದಲಾವಣೆಯೊಂದು ಆಗ್ತಿದೆ. ವಿಲ್ಲೀ ಗರ್ಭ ಧರಿಸಿದ್ದಾನೆ. ಎಂದೂ ಗರ್ಭಿಣಿಯಾಗಲು ಸಾಧ್ಯವಿಲ್ಲವೆಂದು ವಿಲ್ಲೀ ಭಾವಿಸಿದ್ದನಂತೆ. ಯಾಕೆಂದ್ರೆ ಆತ 7 ವರ್ಷಗಳಿಂದ ಟೆಸ್ಟೋಸ್ಟೆರಾನ್ ತೆಗೆದುಕೊಳ್ತಿದ್ದನಂತೆ.

ಟೆಸ್ಟೋಸ್ಟೆರಾನ್ ಪುರುಷರ ಅತ್ಯಗತ್ಯ ಹಾರ್ಮೋನ್. ಟೆಸ್ಟೋಸ್ಟೆರಾನ್ ಹಾರ್ಮೋನ್, ಸಂತಾನೋತ್ಪತ್ತಿ, ಲೈಂಗಿಕತೆ, ಸ್ನಾಯು, ಮೂಳೆ ಸಾಂದ್ರತೆಗಳ ಮೇಲೆ ಪ್ರಭಾವ ಬೀರುತ್ತದೆ. ಮಹಿಳೆಯಿಂದ ಪುರುಷನಾಗಲು ವಿಲ್ಲೀ ಈ ಹಾರ್ಮೋನ್ ಪಡೆಯುತ್ತಿದ್ದ ಎನ್ನಲಾಗಿದೆ.

ಆದ್ರೆ ಅಚಾನಕ್ ಗರ್ಭ ಧರಿಸಿದ್ದಾನೆ. ಇದು ಆತನಿಗೆ ಖುಷಿ ನೀಡಿದೆ. ಆದ್ರೆ ಹೆರಿಗೆ ಸೇರಿದಂತೆ ಅನೇಕ ಭಯ ಕೂಡ ಕಾಡ್ತಿದೆಯಂತೆ. ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಆದ್ರೆ ನಮಗೆ ಮಗು ಆಗ್ತಿರುವುದು ಖುಷಿ ವಿಷ್ಯವೆಂದು ಆತ ಹೇಳಿದ್ದಾನೆ.

LEAVE A REPLY

Please enter your comment!
Please enter your name here