ಬಾರ್ ಸಪ್ಲೆಯರ್ TO ಐ.ಪಿ.ಎಸ್ ಆದ ರವಿ ಡಿ ಚೆನ್ನಣ್ಣನವರ್ ಸ್ಫೂರ್ತಿಯ ಕಥೆ !

0
292

ಕನಸು ಕಂಡರೆ ಸಾಲದು ಕಂಡ ಕನಸು,ಇಟ್ಟ ಗುರಿ ಮುಟ್ಟಲು ಛಲವಿರಬೇಕು,ಮನಸ್ಸಿದ್ದರೆ ಬಡತನವಾಗ್ಲಿ ಅದೆಂತಹದೇ ಕಷ್ಟವಾಗಲಿ ಅದು ಅಡ್ಡಬರವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ, ಕರ್ನಾಟಕದ ಹೆಮ್ಮೆಯ ಐ.ಪಿ.ಎಸ್ ಅಧಿಕಾರಿಯಾಗಿ ಇವರು ಮಾಡಿದ ಕಾರ್ಯಗಳು ಬೇರೆಯವರಿಗೆ ನಿದರ್ಶನ, ಬಡತನ ಸಾಧನೆಗೆ ಅಡ್ಡಿಯಾಗಲಾರದು ಎಂದು ತೋರಿಸಿದ ಮಾಹಾನ್ ಸಾಧಕ.ಅವ್ರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಧಕ್ಷ ಅಧಿಕಾರಿ ರವಿ ಡಿ ಚೆನ್ನಣ್ಣನವರ್

 

ಇವರು ನಡೆದು ಬಂದ ದಾರಿ ನಿಜಕ್ಕೂ ಯುವ ಮನಸ್ಸುಗಳಿಗೆ ಮಾರ್ಗದರ್ಶಿ,ಐ. ಪಿ.ಎಸ್ ಆಗಬೇಕೆಂಬ ಕನಸೆನೋ ಇತ್ತು ಅದಕ್ಕೆ ಪೂರಕವಾದ ಯಾವುದೇ ವಾತಾವರಣ ಇರಲಿಲ್ಲ ಆರ್ಥಿಕ ಸಮಸ್ಯೆ ಕನಸಿಗೆ ಅಡ್ಡಿಯಾಗಿತ್ತು ಆದರೆ ಎದುರಾದ ಸಮಸ್ಯೆಗಳನ್ನ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಶಿಖರ ವನ್ನೇ ತಲುಪಿದರು ರವಿ.ಇವತ್ತು ದಕ್ಷ ಅಧಿಕಾರಿ ಯಾಗಿ ದುಷ್ಟರಿಗೆ ಸಿಂಹ ಸ್ವಪ್ನವಾಗಿ ನಿಂತಿದ್ದಾರೆ.

ಗದಗ ಜಿಲ್ಲೆಯ ನಿಲಗುಂದ ಎಂಬ ಹಳ್ಳಿಯಲ್ಲಿ ಹುಟ್ಟಿದ ರವಿಯವರಿಗೆ ಬಡತನ ಹುಟ್ಟಿನೊಂದಿಗೆ ಬಳುವಳಿಯಾಗಿ ಬಂದಿತ್ತು ಇವರ ತಂದೆ ದ್ಯಾಮಪ್ಪ,ತಾಯಿ ರತ್ನಮ್ಮ ಸಹೋದರ ರಾಘವೇಂದ್ರ, ಕೃಷಿ ಇವರ ಕುಟುಂಬಕ್ಕೆ ಆಧಾರ ಹೇಳಿಕೊಳ್ಳುವ ಆಧಾಯ ಏನು ಇರಲಿಲ್ಲ, ಇಂತಹ ಪರಿಸ್ತಿಯಲ್ಲಿ ಬೆಳೆದ ರವಿಯವರಿಗೆ ವಿದ್ಯಾಭ್ಯಾಸ ಕ್ಕೆ ಹಣ ಹೊಂದಿಸುವುದು ಅಪ್ಪ,ಅಮ್ಮ ಗೆ ಕಷ್ಟವಾಗಿತ್ತು,ಹಾಗಿದ್ದ ಮಾತ್ರಕ್ಕೆ ತನ್ಮ ಕನಸನ್ನು ಎಳ್ಳು ನಿರು ಬಿಡಲು ರವಿ ಸಿದ್ಧರಿರಲಿಲ್ಲ .

ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ವಿದ್ಯಾಕಾಶಿ ಧಾರವಾಡ ದಲ್ಲಿ ಪಧವಿಯನ್ನ ಮಾಡಿದರು.ಪಧವಿ ಮುಗಿಸಿದ್ದು ಬಾರ್ ಸಪ್ಲೇಯರ್ ಆಗಿ ದುಡಿದು ಹಾಗೂ ಹಮಾಲಿಯಾಗಿ ನಾನಾ ತರದ ಕೆಲಸವನ್ನ ಮಾಡುತ್ತಾ ಮುಗಿಸುತ್ತಾರೆ.

ಡಿಗ್ರಿಯೇನೋ ಮುಗಿತು ಇನ್ನೂ ಕಾಂಪಿಟೇಟಿವ್ ಎಕ್ಸಾಮ್ ಕೋಚಿಂಗ್ ಗೆ ಹೋಗಬೇಕಾಗಿತ್ತು.ಹೈದರಾಬಾದ್ ನ ಟಾರ್ಗೆಟ್ ಎಂಬ ಕೋಚಿಂಗ್ ಸೆಂಟರ್ ನ ಹೇಗೋ ಮಾಡಿ ಸೇರಿಯೇ ಬಿಟ್ಟರು,ಹಣ ಇಲ್ಲದೆ ಇದ್ರೆ ಏನು ಸಾಧಿಸಿಯೇ ಸಾಡಿಸ್ತೀನಿ ಎನ್ನುವ ಛಲ ಅವರಲ್ಲಿತ್ತು.

2008ರಲ್ಲಿ ಯುಪಿಎಸ್ಸಿ ಎಕ್ಸಾಮ್ ತೆಗೆದುಕೊಂಡು 2009ರಲ್ಲಿ ಫಲಿತಾಂಶ ಬಂತು 703 ನೇ ರ್ಯಾಂಕ್ ಪಡೆದು ಕಂಡ ಕನಸನ್ನ ನನಸು ಮಾಡಿಕೊಂಡರು.ಕಲಬುರ್ಗಿ ಯಲ್ಲಿ ಪ್ರೋಭೀಷನರಿ ಪೀರಿಯಡ್ ಮುಗಿಸಿ ,ಬೆಳಗಾವಿಯಲ್ಲಿ ಹೆಚ್ಚುವರಿ ಎಸ್ಪಿಯಾಗಿ ಕೆಲಸ ಆರಂಭಿಸಿದರು.ಇದೀಗ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಸವೆಯನ್ನ ಸಲ್ಲಿಸುತ್ತಿದ್ದಾರೆ.ಇವರು ಸೇವೆ ಸಲ್ಲಿಸದ ಕಡೆಗಳೆಲ್ಲ ಜನ ಎಂದಿಗೂ ನೆನೆಯುವಂತಹ ಸೇವೆಯನ್ನ ಸಲ್ಲಿಸಿದ್ದಾರೆ.

ಅಂದು ಬಾರ್ ಸಪ್ಲೇಯರ್ ಆಗಿ ಕೆಲಸ ಮಾಡಿದ್ದ ರವಿಯವರು ಇಂದು ಜನ ಮೆಚ್ಚಿದ ಅಧಿಕಾರಿಯಾಗಿರುವ ಇವರು ಅನೇಕರಿಗೆ ಸ್ಫೂರ್ತಿಯ ಚಿಲುಮೆಯಾಗಿ ದಾರಿದಿಪವಾಗಿದ್ದಾರೆ.

ಒಳ್ಳೆಯವರಿಗೆ ಒಳ್ಳೇದನ್ನೇ ಮಾಡಬೇಕು.ಕೆಟ್ಟವರನ್ನ ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಬೇಕು.ಮೇಲಿಂದ ಮೇಲೆ ತಪ್ಪನ್ನು ಮಾಡ್ತಾ ಇಂದ್ರೇ ಪೊಲೀಸ್ ಪವರ್ ತೋರಿಸ್ಬೇಕು ಅನ್ನೋ ಈ ಸೂಪರ್ ಕಾಪ್. ಪೊಲೀಸ್,ಐ ಎ ಎಸ್,ಐಪಿಎಸ್ ಅಗೋ ಅಧಿಕಾರಿಗಳಿಗೆ ಪ್ರೇರಣೆಯಲ್ಲವೇ.ಇಂತಹ ರಿಯಲ್ ಹೀರೊಗೆ ಸಲಾಂ

LEAVE A REPLY

Please enter your comment!
Please enter your name here