ನಿಖಿಲ್ ಎಲ್ಲಿದ್ದೀಯಪ್ಪ ಎಂದು ಡ್ಯಾನ್ಸ್ ಮಾಡಿದ ಹುಡುಗಿಯರಿಗೆ ಬಿತ್ತು ಗೂಸಾ !

2
22212

ಅದು ನಿಖಿಲ್ ಕುಮಾರಸ್ವಾಮಿ ಅವರ ಅಭಿನಯದ ಮೊದಲ ಚಿತ್ರವಾದ ಜಾಗ್ವಾರ್ ಚಿತ್ರದ ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ತಮ್ಮ ಮಗ ಆದ ನಿಖಿಲ್ ಕುಮಾರಸ್ವಾಮಿ ಅವರನ್ನು ವೇದಿಕೆಗೆ ಕರೆಯುತ್ತಾರೆ. ನಿಖಿಲ್ ಅವರನ್ನು ವೇದಿಕೆಗೆ ಕರೆಯಲು ಕುಮಾರಸ್ವಾಮಿ ಅವರು ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೂಗುತ್ತಾರೆ.

 

ಇದಕ್ಕೆ ಪ್ರತಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ನಿಮ್ಮನ್ನು ಮತ್ತು ನಮ್ಮ ತಾತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನಗಳ ಮಧ್ಯೆ ಇದಿನಿ ಅಪ್ಪ ಎಂದು ಹೇಳುತ್ತಾರೆ. ಅಂದು ನಡೆದಿದ್ದ ಈ ಘಟನೆಯ ವಿಡಿಯೊವನ್ನು ಇಟ್ಟುಕೊಂಡು ಇದೀಗ ಹಲವಾರು ಮಂದಿ ನಾನಾ ರೀತಿಯ ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ತಮಗೆ ಇಷ್ಟ ಬಂದ ರೀತಿಯಲ್ಲಿ ಈ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ.

ಇನ್ನು ಇತ್ತೀಚೆಗಷ್ಟೇ ನಂಜನಗೂಡಿನ ಕಾಲೇಜೊಂದರಲ್ಲಿ ಯುವತಿಯರು ವೇದಿಕೆಯ ಮೇಲೆ ನೃತ್ಯ ಮಾಡುವಾಗ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಡಾನ್ಸ್ ಮಾಡುವುದರ ಜೊತೆಗೆ ಬರೀ ಓಳು ಎಂದು ಸಹ ಸೇರಿಸಿ ನೃತ್ಯ ಮಾಡಿದ್ದಾರೆ. ಇನ್ನು ಈ ರೀತಿ ನೃತ್ಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹುಡುಗಿಯರು ಈ ರೀತಿ ಕುಮಾರಸ್ವಾಮಿ ಮತ್ತು ನಿಖೀಲ್ ಕುಮಾರಸ್ವಾಮಿ ಅವರ ಸಂವಾದಕ್ಕೆ ಡಾನ್ಸ್ ಮಾಡುತ್ತಿದ್ದರೆ ನೆರೆದಿದ್ದವರೆಲ್ಲ ನಗುತ್ತಿದ್ದರು.

ಹೀಗಾಗಿ ಈ ವಿಡಿಯೋದಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಅವಮಾನವಾದಂತೆ ಆಗಿದೆ ಎನ್ನುವ ಕಾರಣಕ್ಕೆ ನಂಜನಗೂಡು ಜೆಡಿಎಸ್ ನ ಕೆಲ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸೇರಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಆ ಹುಡುಗಿಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ದೂರನ್ನು ನೀಡಿದ್ದಾರೆ. ಹೀಗಾಗಿ ಕಾಲೇಜು ಹುಡುಗಿಯರ ವಿರುದ್ಧ ಕ್ರಮವನ್ನು ಕೈಗೊಳ್ಳಲಿದೆ ಎನ್ನಲಾಗಿದೆ.

2 COMMENTS

  1. ಶುದ್ದ ಸುಳ್ಳು,ದಯವಿಟ್ಟು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ ????

LEAVE A REPLY

Please enter your comment!
Please enter your name here